ಇಲಾಖೆಯ ಚಟುವಟಿಕೆಗಳು

ಈಗ ಪ್ರಸಿದ್ಧವಾಗಿರುವ “ಭಾರತ ರಾಷ್ಟ್ರೀಯ ಪತ್ರಗಾರ”ವು 1891 ರಲ್ಲಿ “ಇಂಪೀರಿಯಲ್ ರಿಕಾಡ್ರ್ಸ್ ಇಲಾಖೆ” ಎಂಬ ಹೆಸರಿನಿಂದ ದೆಹಲಿಯಲ್ಲಿ ಪ್ರಪ್ರಥಮವಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದ ಪತ್ರಾಗಾರ ಚಟುವಟಿಕೆಗಳು ಭಾರತದಲ್ಲಿ ಪ್ರಾರಂಭವಾಗಿರುತ್ತವೆ;

  • ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ದಾಖಲಾತಿ ಮತ್ತು ಕಡತಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು.
  • ಸರ್ಕಾರದ ವಿವಿಧ ಇಲಾಖೆಗಳು ಗುರುತಿಸಿದಂತೆ ಅವಧಿ ಮೀರಿದ ಕಡತಗಳನ್ನು ಸಮಯಕ್ಕೆ ಸರಿಯಾಗಿ ನಾಶಪಡಿಸಿ ಆಡಳಿತವನ್ನು ಸುಗಮಗೊಳಿಸಲು ಸಹಕರಿಸುವುದು.
  • ಚಾಲ್ತಿಯಲ್ಲಿಲ್ಲದ ಮತ್ತು ರಹಸ್ಯವಲ್ಲದ ಸರ್ಕಾರಿ ದಾಖಲಾತಿ ಗಳನ್ನುಸಂಶೋಧಕರಿಗೆ,ಪಂಡಿತರಿಗೆ,ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮವಹಿಸಿ ಅವರ ಜ್ಞಾನಾರ್ಜನೆಗೆ ಸಹಾಯಮಾಡುವುದು.
  • ಸ್ವಾಯತ್ತ ಸಂಘ-ಸಂಸ್ಥೆಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಹಾಗೂ ವ್ಯಕ್ತಿಗಳಲ್ಲಿರುವ ಚಾರಿತ್ರಿಕ ಮೌಲ್ಯವಿರುವ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮತ್ತು ಅವರ ಸಹಕಾರದಿಂದ ಅವುಗಳನ್ನು ಸ್ವಾಧೀನ ಪಡಿಸಿಕೊಂಡು ವೈಜ್ಞಾನಿಕವಾಗಿ ಸಂರಕ್ಷಿಸುವುದು.
  • ನಶಿಸಿಹೋಗುತ್ತಿರುವ ಐತಿಹಾಸಿಕ ಮೌಲ್ಯದ ಸರ್ಕಾರಿ ಮತ್ತು ಖಾಸಗಿ ದಾಖಲಾತಿಗಳನ್ನುಮೈಕ್ರೋಫಿಲಂ ಮಾಡಿಸುವುದು ಮತ್ತು ಕಂಪ್ಯೂಟರ್-ಸ್ಕ್ಯಾನ್ ಮಾಡಿಸಿ ವೈಜ್ಞಾನಿಕವಾಗಿ ಸಂರಕ್ಷಿಸುವುದು.
  • ಪತ್ರಾಗಾರ ಇಲಾಖೆಯಲ್ಲಿರುವ ಮತ್ತು ಖಾಸಗಿ ಸಂಘ-ಸಂಸ್ಥೆ ಮತ್ತು ವ್ಯಕ್ತಿಗಳಲ್ಲಿರುವ ಸಾರ್ವಜನಿಕರಿಗೆ ಉಪಯೋಗವಾಗುವಂತಹ ದಾಖಲಾತಿಗಳನ್ನು ಪ್ರಕಟಿಸಿ ಅವಶ್ಯಕವಿರುವವರಿಗೆಲ್ಲಾ ಲಭ್ಯವಾಗುವಂತೆ ಮಾಡುವುದು.
  • ಖಾಸಗಿ ಸಂಘ-ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅವರಲ್ಲಿರುವ ಅಮೂಲ್ಯವಾದ ಐತಿಹಾಸಿಕ ದಾಖಲಾತಿಗಳನ್ನು ಸಂರಕ್ಷಿಸಲು ಸಲಹೆ ಮತ್ತು ತರಬೇತಿ ನೀಡುವುದು ಮತ್ತು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಧನ ಸಹಾಯಕ್ಕೆ ಶಿಫಾರಸ್ಸು ಮಾಡುವುದು.
  • ಪತ್ರಾಗಾರದಲ್ಲಿ ಆಳವಾದ ಜ್ ಞಾನ ಮತ್ತು ಆಸಕ್ತಿ ಇರುವ ಖಾಸಗಿ ಸಂಘ-ಸಂಸ್ಥೆಗಳ ಮತ್ತು ವ್ಯಕ್ತಿಗಳ ಸಹಕಾರದೊಂದಿಗೆ ಎಲ್ಲೆಲ್ಲಿ ಅಮೂಲ್ಯವಾದ ಖಾಸಗಿ ದಾಖಲಾತಿಗಳಿವೆಯೋ ಅವುಗಳನ್ನು ಪರಿವೀಕ್ಷಣೆ ಮೂಲಕ ಪತ್ತೆಹಚ್ಚಿ ಸಮಾಜದ ಉಪಯೋಗಕ್ಕಾಗಿ ಅವುಗಳ ಸಂರಕ್ಷಣೆಗೆ ಸಹಾಯಮಾಡುವುದು.